ಬಿಗ್ ಬಾಸ್ ಕನ್ನಡ ಸೀಸನ್ 5 : ಶ್ರುತಿ ಪ್ರಕಾಶ್ ಅವರದ್ದೇ ತಪ್ಪು ಅಂದ್ರು ಸುದೀಪ್ | Filmibeat Kannada

2017-10-30 995

Bigg Boss Kannada 5: Divakar had rejected the 'Worst performer' tag from Captain Shruthi. Diwakar annoyed with Shruthi Prakash. After Sihi Kahi Chandru, Tejaswini, now Shruthi Prakash also targets Diwakar. Diwakar is really sad because of Shruthi's partiality. But now even Sudeep says, Shruti Prakash's decision was wrong.


'ಕಳಪೆ' ಕಿತ್ತಾಟದಲ್ಲಿ ಶ್ರುತಿ ಪ್ರಕಾಶ್ ಮಾಡಿದ್ದು ತಪ್ಪು ಎಂದ ಕಿಚ್ಚ ಸುದೀಪ್! ಮೊಟ್ಟೆ ಸುತ್ತ ನೀಡಲಾಗಿದ್ದ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಬಳಿಕ, ಅತ್ಯುತ್ತಮ ಆಟಗಾರ ಹಾಗೂ ಕಳಪೆ ಆಟಗಾರರನ್ನು ಗುರುತಿಸುವ ಜವಾಬ್ದಾರಿ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಮೇಲಿತ್ತು. ಇಡೀ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಹಿ ಕಹಿ ಚಂದ್ರು 'ಬೆಸ್ಟ್ ಪರ್ಫಾಮರ್' ಅಂತ ಶ್ರುತಿ ಪ್ರಕಾಶ್ ಘೋಷಿಸಿದರು. ನಂತರ ಆಟದ ವೈಖರಿ ಹಾಗೂ ನಡವಳಿಕೆ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ದಿವಾಕರ್ 'ಕಳಪೆ ಪ್ರದರ್ಶನ' ನೀಡಿದ್ದಾರೆ ಅಂತ ಶ್ರುತಿ ಪ್ರಕಾಶ್ ಹೇಳಿದರು.''ಆಟದಲ್ಲಿ ನಾನು ಕಳಪೆ ಪ್ರದರ್ಶನ ನೀಡಿಲ್ಲ'' ಎಂದು ವಾದಿಸಿದ ದಿವಾಕರ್, 'ಕಳಪೆ' ಬೋರ್ಡ್ ಧರಿಸಲು ಒಲ್ಲೆ ಎಂದುಬಿಟ್ಟರು. 'ಕಳಪೆ' ಬೋರ್ಡ್ ನ 'ಆಟದ ವೈಖರಿ' ಮಾತ್ರ ನೋಡಿ ಕೊಡಬೇಕೇ ಹೊರತು ನಡವಳಿಕೆ ನೋಡಿ ನೀಡುವಂಥದ್ದು ಅಲ್ಲ ಎಂಬ ಅಭಿಪ್ರಾಯವೂ 'ಬಿಗ್ ಬಾಸ್' ಮನೆಯೊಳಗೆ ವ್ಯಕ್ತವಾಯಿತು.

Videos similaires